HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮೈಸೂರಿನಲ್ಲಿ ವಿಚಾರ ಸಂಕಿರಣ : ಸುದ್ದಿ ಬಿಡುಗಡೆ ಸಂಪಾದಕರಿಂದ `ಸಣ್ಣ ಪತ್ರಿಕೆಗಳ ನಿರ್ವಹಣೆ ಮತ್ತು ಸವಾಲು’ ವಿಷಯ ಮಂಡನೆ

dr

dr1

dr2

dr3

dr4ಬೆಳ್ತಂಗಡಿ : ಕರ್ನಾಟಕ ಸರಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮೈಸೂರು ಇದರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ದಿ. ರಾಜಶೇಖರ ಕೋಟಿಯವರ ಸ್ಮರಣಾರ್ಥ ‘ಸಾಮಾಜಿಕ ಜಾಲತಾಣಗಳು ಸಣ್ಣ ಪತ್ರಿಕೆಗಳ ಮೇಲೆ ಉಂಟು ಮಾಡಿರುವ ಪರಿಣಾಮ, ಸವಾಲುಗಳು’ ಎಂಬ ವಿಚಾರದಲ್ಲಿ ವಿಚಾರ ಸಂಕಿರಣ ಡಿ. 7ರಂದು ಬೆಳಿಗ್ಗೆ 10.30ರಿಂದ ಮೈಸೂರಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ನಡೆಯಿತು.
ಕನ್ನಡಪ್ರಭ ಮತ್ತು ಸುವರ್ಣ ಟಿ.ವಿಯ. ಸಂಪಾದಕ ರವಿ ಹೆಗಡೆಯವರು ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಸಿದ್ದರಾಜುರವರು ಅಧ್ಯಕ್ಷತೆ ವಹಿಸಿದ್ದರು. ದಿ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಮೈಸೂರು ಬ್ಯೂರೋ ಚೀಫ್ ಕೆ. ಶಿವಕುಮಾರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಮತ್ತು ಮೈಸೂರಿನ ಆಂದೋಲನ ಪತ್ರಿಕೆಯ ಸಂಪಾದಕ ರವಿ ಕೋಟಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಎಸ್. ಶಂಕರಪ್ಪ, ಮೈಸೂರು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶಬಾಬು ಹಾಗೂ ಮೈಸೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಬಿಡುಗಡೆ ಸಂಪಾದಕ ಡಾ. ಯು.ಪಿ. ಶಿವಾನಂದರವರಿಂದ ‘ಸಣ್ಣ ಪತ್ರಿಕೆಗಳ ನಿರ್ವಹಣೆ ಮತ್ತು ಸವಾಲು’ ವಿಷಯ ಮಂಡನೆ :
ಮೈಸೂರಿನಲ್ಲಿ ನಡೆಯುವ ‘ಸಾಮಾಜಿಕ ಜಾಲತಾಣಗಳು ಸಣ್ಣ ಪತ್ರಿಕೆಗಳ ಮೇಲೆ ಉಂಟು ಮಾಡಿರುವ ಪರಿಣಾಮ, ಸವಾಲುಗಳು’ ಎಂಬ ವಿಚಾರ ಸಂಕಿರಣದ ಗೋಷ್ಠಿ ೧ರಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು, ಈ ಬಾರಿಯ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಯು.ಪಿ. ಶಿವಾನಂದರವರು ‘ಸಣ್ಣ ಪತ್ರಿಕೆಗಳ ನಿರ್ವಹಣೆ ಮತ್ತು ಸವಾಲು’ ಎಂಬ ವಿಚಾರದ ಬಗ್ಗೆ ಮಾತನಾಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.