ಈದ್ ಮಿಲಾದ್ ದಿನಾಚರಣೆ

Savanalu eid miladಈದ್ ಮಿಲಾದ್ ದಿನಾಚರಣೆ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೊದಲ ದಿನವಾದ ನ ೨೯ರಂದು ಮದ್ದಡ್ಕ ಜುಮಾ ಮಸೀದಿ ಮುಖ್ಯ ಧರ್ಮಗುರು ಬಹು| ರಫೀಕ್ ಅಹ್ ಸನಿ ಉಸ್ತಾದ್‌ರವರಿಂದ ಮೊದಲ ದಿನದ ಪ್ರಭಾಷಣ ನಡೆಯಿತು. ಸಬರಬೈಲ್ ಎಜುಕೇಶನ್ ಅಕಾಡಮಿಯ ಚೆರ್‌ಮೆನ್ ಸಯ್ಯಿದ್ ತಂಗಳ್‌ರವರಿಂದ ನ. ೩೦ರಂದು ಮುಖ್ಯ ಪ್ರಭಾಷಣದೊಂದಿಗೆ ವಿಶೇಷ ದುವಾ ನೆರವೇರಿಸಿದರು. ಹಾಗೂ ಸುನ್ನೀ ವಿಧ್ಯಾಬ್ಯಾಸಕ್ಕೆ ಒಳಪಟ್ಟ ಮದರಸ ವಿಧ್ಯಾರ್ಥಿಗಳಿಂದ ಪ್ರವಾದಿ ಪೈಗಂಬರರ ಜನ್ಮ ದಿನದ ವಿಶೇಷ ಕಾರ್ಯಕ್ರಮಗಳು ಮುಖ್ಯ ಧರ್ಮ ಗುರು ಬಹು| ಸುಲಾಇಮಾನ್ ಲತೀಪಿ ನೇತೃತತ್ವದಲ್ಲಿ ನಡೆಯಿತು. ನ. ೧ರಂದು ಸವಣಾಲು ಬದ್ರಿಯಾ ಜುಮಾ ಮಸೀದಿಯಿಂದ ಈದ್ ಮಿಲಾದ್ ಮೆರವಣಿಗೆಯು ಮಸೀದಿಯ ಇನ್ನೊಂದು ಅಂಗ ಸಂಸ್ಥೆಯಾದ ನಡ್ತಿಕಲ್ಲಿನಲ್ಲಿರುವ ಹಿಮಯತುಲ್ ಇಸ್ಲಾಂ ಮದರಸ ಮೂಲಕ ಮಂಜದಬೆಟ್ಟು ರಸ್ಥೆಯಾಗಿ ಮೆರವಣಿಗೆ ನಡೆಯಿತು. ಈ ಕಾರ್ಯಕ್ರಮಗಳಲ್ಲಿ ಧರ್ಮ ಗುರು ಜುಮಾ ಮಸೀದಿ ಖತೀಬ್ ಉಸ್ತಾದ್ ಸುಲೈಮಾನ್ ಲತೀಫ್ ನೇತೃತ್ವ ವಹಿಸಿದ್ದು, ಆಡಳಿತ ಕಮಿಟಿ ಅಧ್ಯಕ್ಷ ಡಿ.ರಫೀಕ್, ಯಂಗ್ ಮೆನ್ಸ್ ಅಧ್ಯಕ್ಷ ಎಸ್.ಎ ಇಬ್ರಾಹಿಂ, ಆನುಗ್ರಹ ಸ್ಕೂಲ್ ಬುಕ್ ಕಂಪೆನಿಯ ಆಡಳಿತ ನಿರ್ದೇಶಕ ಬಹು| ಅಶ್ರಫ್ ಫೈಝಿ, ಬೆಂಗಳೂರು ಅಬ್ದುಲ್ ರಶೀದ್ ನಹೀಮಿ, ಆನುಗ್ರಹ ಟ್ರೈನಿಂಗ್ ಕಾಲೇಜು ಪ್ರಾಂಶುಪಾಲ ಎಂ.ಜಿ.ತಲ್ ಹತ್ ಸವಣಾಲು, ಯಾಕೂಬ್ ಮುಸ್ಲಿಯಾರ್ ಸವಣಾಲು, ಇಕ್ಬಾಲ್ ಸಕಾಫಿ ಕಲ್ಲೇರಿ, ಎಲ್ಲಾ ಯಂಗ್ ಮೆನ್ಸ್ ಕಮಿಟಿ ಯುವಕರು, ಸದಸ್ಯರು, ಆಡಳಿತ ಕಮಿಟಿ ಎಲ್ಲಾ ಸದಸ್ಯರು, ಜಮಾಅತ್ ಸದಸ್ಯರು, ಹಿರಿಯ ಮಹನಿಯರು, ಮದರಸ ವಿದ್ಯಾರ್ಥಿಗಳು. ಶಮರ ಬದ್ ಅಲ್ಲಿ ಪಾಳ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.