ಮಾಜಿ ಸೈನಿಕರ ಸಂಘದ ಸಮಾವೇಶ

maji sainikara sanghaಉಜಿರೆ: ಮಾಜಿ ಸೈನಿಕರ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ಇದರ 13ನೇ ವರ್ಷದ ವಾರ್ಷಿಕ ಸಮಾವೇಶ ನ.೨೬ ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಪ್ರಸ್ತುತ ಅಧ್ಯಕ್ಷ ಮುಹಮ್ಮದ್ ರಫಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್ ಮುಂಡಾಜೆ ಉಪಸ್ಥಿತರಿದ್ದರು.
ವಾರ್ಷಿಕೋತ್ಸವ ಪ್ರಯುಕ್ತ ಸಂಘದ ಸದಸ್ಯರಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಮನೋರಂಜನಾತ್ಮಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಸಂಘದ ತೀರ್ಮಾನದಂತೆ ಪ್ರತೀ ವರ್ಷ ಕೈಗೊಳ್ಳುವ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭದ ಭಾಗವಾಗಿ ಈ ಬಾರಿ ರಾಮ ಭಟ್ ಮತ್ತು ಅವರ ಪತ್ನಿ ಮತ್ತು ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು.
ಪದಾಧಿಕಾರಿಗಳಾದ ಕೆ.ಎಚ್. ಮೋಹನ್, ಕೃಷ್ಣ ಭಟ್, ಎ.ಕೆ. ಶಿವನ್, ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುನಿಲ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ವಂದನಾರ್ಪಣೆಗೈದರು. ಸಂಘದ ಕಾರ್ಯದರ್ಶಿ ಸುರೇಂದ್ರನ್ ವರದಿ ವಾಚಿಸಿದರು. ಕೋಶಾಧಿಕಾರಿ ಜಗದೀಶ್ಚಂದ್ರ ಲೆಕ್ಕಪತ್ರ ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.