ಧರ್ಮಸ್ಥಳದಲ್ಲಿ ಡ್ರೋನ್ (ಮಾನವ ನಿರ್ಮಿತ ವಿಮಾನ) ಲೋಕಾರ್ಪಣೆ

dharmasthala

dharmasthala1

dharmasthala2

dharmasthala3ಉಜಿರೆ : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನ. 23ರಂದು ಡ್ರೋನ್ (ಮಾನವ ನಿರ್ಮಿತ ವಿಮಾನ) ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 160 ಕೇಂದ್ರಗಳಲ್ಲಿ ರೈತರಿಗೆ ಡ್ರೋನ್ ಬಾಡಿಗೆಗೆ ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ಡ್ರೋನ್‌ನ ರೂವಾರಿ ನಿಡ್ಲೆಯ ಅವಿನಾಶ್ ರಾವ್ ಮತ್ತು ಬಳಗದವರ ಪ್ರಯತ್ನ – ಸಾಧನೆಯನ್ನು ಶ್ಲಾಘಿಸಿ ಹೆಗ್ಗಡೆಯವರು ಅವರನ್ನು ಅಭಿನಂದಿಸಿದರು.
ಕ್ಯಾಂಪ್ಕೋದ ಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದಿಂದ ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿದ್ದು ನಿವೇದನ್ ಎಂಬಾತ ಈಗಾಗಲೇ ಅಡಿಕೆ ಚಹಾ, ಶ್ಯಾಂಪೂ, ಸಾಬೂನು ತಯಾರಿಸಿದ್ದು ಉತ್ತಮ ಬೇಡಿಕೆ ಇದೆ ಎಂದು ಹೆಗ್ಗಡೆಯವರು ತಿಳಿಸಿದರು. ನಿಡ್ಲೆಯ ಅವಿನಾಶ್ ರಾವ್ ಡ್ರೋನ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಿದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಶುಭಾಶಂಸನೆ ಮಾಡಿ ಯಾವುದೇ ಕ್ಷೇತ್ರದಲ್ಲಿ ಅನುಕರಣೆ ಮತ್ತು ಸಂಶೋಧನೆಯಿಂದ ಯಶಸ್ಸು ಪಡೆಯ ಬಹುದು. ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಉಜಿರೆಯ ವಿಜಯರಾಘವ ಪಡ್ವೇಟ್ನಾಯ ಮತ್ತು ಭಾಜಪ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ದೇಸಾಯಿ ಸ್ವಾಗತಿಸಿದರು. ಡಾ. ಸಂದೀಪ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.