HomePage_Banner_
HomePage_Banner_
HomePage_Banner_

ಕಕ್ಕಿಂಜೆ ವಿ and ವಿ ಮಾರುತಿ ಸರ್ವಿಸ್ ಸ್ಟೇಶನ್‌ಗೆ ಆನ್‌ಮೊಲ್ ರಥನ್ ಅವಾರ್ಡ್ – 2017

V and V maruti serviceಕಕ್ಕಿಂಜೆ: ಕಕ್ಕಿಂಜೆಯಲ್ಲಿ ಕೆಲ ವರ್ಷಗಳಿಂದ ಕಾರ್‍ಯಾಚರಿಸುತ್ತಿರುವ ಬಾಬುರಾಜ್ ಇವರ ಮಾಲಕತ್ವದ ವಿ&ವಿ ಮಾರುತಿ ಸರ್ವಿಸ್ ಸ್ಟೇಶನ್‌ಗೆ ನ.15ರಂದು ಮಂಗಳೂರುನಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಸಮ್ಮೇಳನದಲ್ಲಿ ಆನ್‌ಮೊಲ್ ರಥನ್ ಅವಾರ್ಡ್-2017 ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಂಸ್ಥೆಯಲ್ಲಿ ಮಾರುತಿಯ ಅತ್ಯುತ್ತಮ ಗುಣಮಟ್ಟದ ಸೇವೆ ಹಾಗೂ ಬಿಡಿ ಭಾಗಗಳನ್ನು ಅತೀ ಹೆಚ್ಚು ಖರೀದಿಸಿರುವುದನ್ನು ಪರಿಗಣಿಸಿ ಈ ಅವಾರ್ಡ್‌ನ್ನು ನೀಡಲಾಗಿದೆ. ಈ ಅವಾರ್ಡ್‌ನ್ನು ಮಾರುತಿ ಸುಝಕಿ ಸಂಸ್ಥೆಯ ಮಹೇಶ್ ಲಿಂಗ್ಡೆ, ಮಾರೂರು ಸಂಸ್ಥೆಯ ಶಶಿಧರ ಪೈ ಮತ್ತು ರಾಮ್‌ಮೋಹನ್ ಪೈ ನೀಡಿ ಬಾಬುರಾಜ್ ಅವರನ್ನು ಗೌರವಿಸಿದರು. ಈ ಸಂಸ್ಥೆ 2015ರಲ್ಲಿ `ರೆಕೋಗ್ನೇಷನ್ ಅವಾರ್ಡ್’ ಮತ್ತು 2016ರಲ್ಲಿ `ಎಮರ್‌ಜಿಂಗ್ ಸ್ಟಾರ್ ಅವಾರ್ಡ್’ ಪ್ರಶಸ್ತಿಯನ್ನು ಕೂಡಾ ಪಡೆದು ದ.ಕ ಜಿಲ್ಲೆಯಲ್ಲಿ ಸತತ ೩ನೇ ಬಾರಿಗೆ ಪ್ರಶಸ್ತಿ ಪಡೆದ ಪ್ರಥಮ ವರ್ಕ್ ಶಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಗೆ ಪ್ರಶಸ್ತಿಯಲ್ಲದೆ ಬಾಬುರಾಜ್ ಅವರನ್ನು ಮಾರುತಿ ಸುಝಕಿ ಮತ್ತು ಮಾರೂರು ಮೋಟಾರ್‍ಸ್‌ನಿಂದ ನಡೆಸಲಾಗುವ ಡೆಲ್ಲಿಯ ಮಾರುತಿ ಸುಝಕಿ ಫ್ಯಾಕ್ಟರಿಗೆ ಸ್ಟಡಿ ಟೂರ್‌ಗೆ ಹಾಗೂ 2018ರಲ್ಲಿ ನಡೆಯುವ ಥೈಲ್ಯಾಂಡ್ ದೇಶದ ಪ್ರವಾಸಕ್ಕೆ ಸಂಸ್ಥೆ ಆಯ್ಕೆಮಾಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.