ಬೆಲ್ಜಿಯಂನಿಂದ ಶೈಕ್ಷಣಿಕ ತಂಡ ಎಸ್.ಡಿ.ಎಂ.ಬಿ.ಎಡ್. ಕಾಲೇಜಿಗೆ ಭೇಟಿ

belziyam ninda sdm BEd ge betiಉಜಿರೆ : ಸಂಶೋಧನಾತ್ಮಕ ಅಧ್ಯಯನದ ನಿಮಿತ್ತ ಇತ್ತೀಚೆಗೆ ಬೆಲ್ಜಿಯಂನ ಶೈಕ್ಷಣಿಕ ತಂಡವು ಉಜಿರೆಯ ಎಸ್.ಡಿ.ಎಂ.ಬಿ.ಎಡ್ ಕಾಲೇಜಿಗೆ ಭೇಟಿ ನೀಡಿತು. ಬಿ.ಎಡ್.ಕಾಲೇಜಿನ ಧ್ಯೇಯ, ಉದ್ದೇಶ, ಶೈಕ್ಷಣಿಕ ಸೌಲಭ್ಯ ಮತ್ತು ಕಾಲೇಜಿನ ಪ್ರಾಧ್ಯಾಪಕರ ಪರಿಚಯದೊಂದಿಗೆ ಸಂಸ್ಥೆಯ ಶೈಕ್ಷಣಿಕ ಸಾಧನೆಗಳ ಕುರಿತು ಕಾಲೇಜಿನ ಪ್ರಾಂಶುಪಾಲ ಡಾ.ಕೆ. ನಿತ್ಯಾನಂದರವರು ವಿವರಿಸಿದರು.
ಬೆಲ್ಜಿಯಂ ಶೈಕ್ಷಣಿಕ ತಂಡದಲ್ಲಿ ತರಬೇತುದಾರ ಹೆಲ್ಡೆ ವಾನ್‌ಡೊರೆನ್, ಭೂಗೋಳ ಶಿಕ್ಷಕ ಸ್ಟೆಫಾನಿ ವರ್ಪ್ಲೆಸ್ಟಿ, ಫ್ರೆಂಚ್ ಶಿಕ್ಷಕ ಕಿಮ್ ಹ್ಯೂ, ಜೀವಶಾಸ್ತ್ರ ಹಾಗೂ ಇಂಗ್ಲೀಷ್ ಶಿಕ್ಷಕ ಬ್ರೆಚ್‌ದಗ್ರೇಟರ್, ಸಮಾಲೋಚಕಿ ಸಾರಾ ಡಿ ಬೇಕರ್, ಸಂಶೋಧಕ ಫ್ರಾಂಕ್‌ರೆಂಡರ್ಸ್, ಪ್ರಶಿಕ್ಷಣಾರ್ಥಿ ಸಪ್ನಕುಮಾರ್, ಆನ್‌ಕಾರ್ಡಿನೆಲ್, ನೀಲ್ ಡಿ ಗರ್ಸೆಮ್, ಜೊಲಿಯನ್ ವಂಡರ್‌ಗ್ರೂಕ್, ಸಂದೀಪ್ ಶೆಟ್ಟಿ ಮೊದಲಾದವರಿದ್ದು, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಶಿಕ್ಷಕ ತರಬೇತುದಾರ ಪ್ರದೀಪ್ ಕುಮಾರ್ ಇವರು ತಂಡದ ಸಂಯೋಜಕರಾಗಿ ಜತೆಗಿದ್ದರು.
ಬೆಲ್ಜಿಯಂನ ಶೈಕ್ಷಣಿಕ ತಂಡದೊಡಗಿನ ಸಂವಾದದಲ್ಲಿ ಮಾತನಾಡಿದ ಎಸ್.ಡಿ.ಎಂ. ಬಿ.ಎಡ್.ಕಾಲೇಜಿನ ಉಪನ್ಯಾಸಕ ಸಂತೋಷ್ ಸಲ್ದಾನ ರವರು ದ.ಕ ಶಾಲೆಗಳ ತರಗತಿಗಳಲ್ಲಿ ಕನ್ನಡ, ತುಳು, ಕೊಂಕಣಿ, ಮಲಯಾಳಂ, ಮರಾಠಿ ಮೊದಲಾದ ಐದಾರು ಮಾತೃಭಾಷೆಯ ಮಕ್ಕಳಿದ್ದು ಆ ಮಕ್ಕಳಿಗೆ ಪಠ್ಯದ ಪರಿಕಲ್ಪನೆಗಳನ್ನು ಅರ್ಥೈಸುವಲ್ಲಿ ಇಲ್ಲಿನ ಶಿಕ್ಷಕರಿಗೆ ಬೆಲ್ಜಿಯಂನ ಪರಿಸರಕ್ಕಿಂತ ಹೆಚ್ಚಿನ ಸವಾಲುಗಳಿವೆ. ಹಾಗೆಯೇ ಇಲ್ಲಿನ ಮಕ್ಕಳು ಶಾಲೆಯಲ್ಲಿ ಕಲಿಸುವ ಭಾಷೆಗಳ ಜೊತೆಗೆ ಸ್ಥಳೀಯವಾದ ಹಲವಾರು ಭಾಷೆಗಳನ್ನೂ ಕಲಿತಿರುವುದು ಈ ಪರಿಸರದ ಮಕ್ಕಳ ವಿಶೇಷತೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಬಿ.ಎಡ್.ಕಾಲೇಜಿನ ಉಪನ್ಯಾಸಕ ಪ್ರವೀಣ್ ಪದ್ಯಾಣ, ಕು.ವಿದ್ಯಾಶ್ರೀ ಹಾಗೂ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಬಿ.ಎಡ್.ನ ಪ್ರಶಿಕ್ಷಣಾರ್ಥಿ ಮರ್ಲಿನ್ ಪಿರೇರಾ ಸ್ವಾಗತಿಸಿ, ಮನಸ್ವಿನಿ ಧನ್ಯವಾದವಿತ್ತು ವರ್ನನ್ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.