ಜಿಲ್ಲಾ ಕಬಡ್ಡಿ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾಗಿ ಕೃಷ್ಣಾನಂದ ರಾವ್ ಮುಂಡಾಜೆ

Advt_NewsUnder_1
Advt_NewsUnder_1

KRISHNANDA RAOಬೆಳ್ತಂಗಡಿ: ಅಂತಾರಾಷ್ಟ್ರೀಯ ಕಬಡ್ಡಿ ಮತ್ತು ಯೋಗ ತೀರ್ಪುಗಾರರಾಗಿರುವ ಬೆಳಾಲು ಎಸ್‌ಡಿಎಂ ಅನುದಾನಿತ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಾನಂದ ರಾವ್ ಮುಂಡಾಜೆ ಇವರು ದ.ಕ. ಜಿಲ್ಲಾ ಕಬಡ್ಡಿ ತೀರ್ಪುಗಾರರ ಮಂಡಳಿಯ ಮುಂದಿನ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ರಾಜ್ಯಾಧ್ಯಕ್ಷ ರಾಕೇಶ್‌ಮಲ್ಲಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಈ ವೇಳೆ ಕಾರ್ಯಾಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಪ್ರ. ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಪ್ರಮುಖರಾದ ಅಮರನಾಥ ರೈ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೃಷ್ಣಾನಂದ ರಾವ್ ಅವರು ಅರಣ್ಯ ಇಲಾಖೆ ನಿವೃತ್ತ ಸಿಬ್ಬಂದಿಯಾಗಿದ್ದ ದಿ. ಬಿ.ಆರ್. ರಾವ್ ಮುಂಡಾಜೆ ಮತ್ತು ದಿ. ಲಕ್ಷ್ಮೀ ಆರ್ ರಾವ್ ದಂಪತಿ ಪುತ್ರರಾಗಿದ್ದು, ಸ್ಕೂಲ್ ಗೇಮ್
ಫೆಡರೇಷನ್ ಆಫ್ ಇಂಡಿಯಾ ಇದರ ಅಧಿಕೃತ ಕಬಡ್ಡಿ ತೀರ್ಪುಗಾರರಾಗಿದ್ದಾರೆ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ, ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್ ಉಜಿರೆ ತಂಡದ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ರಾಜ್ಯ -ರಾಷ್ಟ್ರಮಟ್ಟದ ಪಂದ್ಯಾಕೂಟಗಳಲ್ಲಿ ಯಶಸ್ವಿ ತೀರ್ಪುಗಾರಿಕೆ ನೀಡಿರುವ ಅವರು ಅನೇಕ ಗ್ರಾಮೀಣ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದವರೆಗೂ ಭಾಗವಹಿಸುವಂತೆ ತರಬೇತು ನೀಡಿದ ಕೀರ್ತಿಹೊತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.