ಮಚ್ಚಿನ: ಬಳ್ಳಮಂಜ ಕ್ಷೇತ್ರದಲ್ಲಿ ಶೇಷ-ನಾಗ ಜೋಡುಕರೆ ಕಂಬಳ


ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ಬಳ್ಳಮಂಜ ಮಚ್ಚಿನ ಇಲ್ಲಿನ ಅಣತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ದ. ಕ ಜಿಲ್ಲೆಯ ಸುಪ್ರಸಿದ್ಧ ಶೇಷ-ನಾಗ ಜೋಡುಕರೆ ಕಂಬಳ ಡಿ. ೨೯ ರಂದು ವಿಜೃಂಬಣೆಯಿಂದ ಜರುಗಿತು.

ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷ ಜಯವಿಕ್ರಮ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ ಅಧ್ಯಕ್ಷ ಹರ್ಷಲತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಿಷಮರ್ದಿನಿ ದೇವಸ್ಥಾನ ಶ್ರೀ ಕ್ಷೇತ್ರ ಪಾರೆಂಕಿ ಭಾಗಿಯಾಗಿದ್ದರು.

ಕಂಬಳ ಸಮಿತಿ ಅಧ್ಯಕ್ಷ ಹೆಚ್ ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು, ಕಾರ್ಯದರ್ಶಿ ಕುಮಾರಯ್ಯ ನಾಯ್ಕ ಮಾಯಿಲೋಡಿ, ಕೋಶಾಧಿಕಾರಿ ಸಂಜೀವ ಮಾಯಿಲೋಡಿ, ದೇವಳದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ಚಿತ್ರ: ಹರ್ಷ ಸ್ಟುಡಿಯೋ ಬಳ್ಳಮಂಜ

Copy Protected by Chetan's WP-Copyprotect.